ಸಪ್ನಾ ಪೂನಿಯಾ (ಜನನ ೨ ಜನವರಿ ೧೯೮೮) ಎಂದೂ ಕರೆಯಲ್ಪಡುವ ಸಪನಾ ಅವರು ಭಾರತ ದೇಶದ ರಾಜಸ್ಥಾನ ರಾಜ್ಯದ ಜೈಪುರದ ಮಹಿಳಾ ಓಟದ ನಡಿಗೆಗಾರ್ತಿ/ರೇಸ್‌ವಾಕರ್. ಅವರು ೨೦೧೫ ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ೨೦ ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ೨೦೧೬ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೨೦ ಕಿಮೀ ನಡಿಗೆಯಲ್ಲಿ ಸ್ಪರ್ಧಿಸಿದರು ಆದರೆ ಪೂರ್ಣಗೊಳಿಸಲಿಲ್ಲ. ಇವರು ೨೦೧೫ ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೨೦ ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ೧:೪೦:೩೫.೭೦ ಸಮಯ ನಡೆಯುವುದರ ಮೂಲಕ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು. ಪುನಿಯಾ ಅವರು ರಾಜಸ್ಥಾನದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಕೂಡ ಆಗಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==